Monday, 2 April 2018




ಸರ್ಕಾರಿ ಪ್ರೌಢಶಾಲೆ ಕೋಣಂದೂರಿನಲ್ಲಿ *"ಚಿಣ್ಣರ ಕಲರವ"* ಬೇಸಿಗೆ ರಂಗ ಶಿಬಿರ ಅತ್ಯಂತ ಯಶಸ್ವಿ ಮತ್ತು ವಿಶೇಷವಾಗಿ ಉದ್ಘಾಟನೆಗೊಂಡಿತು.
ತೀರ್ಥಹಳ್ಳಿ ಸಾ. ಶಿ. ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಪ್ರಸನ್ನ ಕುಮಾರ್, ಕೋಣಂದೂರಿನ ಉದ್ಯಮಿ ಶ್ರೀ ಸದಾಶಿವ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀ ಕುಮಾರ್ ಸ್ವಾಮಿ, ಅನ್ವರ್ ಬಾಷಾ, ಪ್ರಭು ಕೆ.ಎನ್. ಶಿವರಾಜ,, ಆಸ್ಮಾ ಇವರು ದೀಪ ಬೆಳಗುವ ಮೂಲಕ ರಂಗ ಶಿಬಿರವನ್ನು ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಏಕಪಾತ್ರಾಭಿನಯ ಮಾಡುವ ಮೂಲಕ ಶಿಬಿರಾರ್ಥಿಗಳಿಗೆ ಉತ್ತೇಜನ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಎಸ್.ಡಿ.ಎಮ್.ಸಿ. ಸದಸ್ಯರು, ಹಳೇ ವಿದ್ಯಾರ್ಥಿಗಳು, ಹಾಜರಿದ್ದರು.

No comments:

Post a Comment

GOVT. HIGH SCHOOL KONANDUR DEPARTMENT